Saturday, June 28, 2008

ಸಾಧ್ಯವಾದರೆ ಕ್ಷಮಿಸಿಬಿಡಿ ಒಮ್ಮೆ !

ಸ್ನೇಹದ ಹೆಸರಲ್ಲಿ ಕೈಗೆ ಮೋಸದ ಸರಕು ತುಂಬಿಸಲು ಬಂದ ಪಾಪಿ ನಾನಲ್ಲ ನಿಮಗೆ ತುಂಬಾ ನೋವು ಮಾಡ್ಬಿಟ್ಟೆ ಅನ್ನಿಸುತ್ತೆ, ಅರಿವಿದ್ದೋ ಇಲ್ಲದೆಯೋ ತುಂಬಾ ಸಾರಿ ತಪ್ಪುಗಳನ್ನ ಮಾಡಿಬಿಡುತ್ತೇವೆ ಹಾಗೆ ಮಾಡುವಾಗ ಮುಂದಿನ ಯೋಚನೆ ಇರುವುದಿಲ್ಲ ಆ ಕ್ಷಣದ ಇಲ್ಲ ತಾನು ಮಾಡುತ್ತಿರುವ ಕೆಲಸದ ಮೇಲೆ ಮಾತ್ರ ಘಮನವಿರುತ್ತದೆ ತಪ್ಪಿನ ಅರಿವಾಗುವುದು ಅದು ಒಂದು ಹಂತಕ್ಕೆ ಬಂದ ಮೇಲೆ , ನಾನು ಆಕೆಯನ್ನ ಪ್ರೀತಿಸಿದ್ದೆ ತಪ್ಪೋ ಇಲ್ಲ ಸ್ನೇಹದ ಮದ್ಯೆ ಪ್ರೀತಿ ತಂದದ್ದು ತಪ್ಪೋ ಗೊತ್ತಿಲ್ಲ "Every thing depend on how we treat " ಅಂತೆ ಹಾಗೆ ನೀವು ನನ್ನ ತುಂಬಾ ಹತ್ತಿರದಿಂದ ಬಲ್ಲವರಾಗಿದ್ದರಿಂದ ನನ್ನ ಒಪ್ಪಿಕೊಳ್ತೀರಾ ಅಂತ ಭಾವಿಸಿಕೊಂಡು ಆಕೆಯನ್ನು ಪ್ರೀತಿಸಿ ಬಿಟ್ಟೆ , ಸೋನು ನೀನು ಆವತ್ತು ನನ್ನ ಪ್ರೀತಿಯ ವಿಷಯ ತಿಳಿದ ದಿನ ಸಾವಧಾನವಾಗೇ ಅಕ್ಕನನ್ನ ಪ್ರೀತಿಸ ಬೇಡ ಮನೆಯಲ್ಲಿ ಒಪ್ಪೋಲ್ಲ ತೊಂದರೆಯಾಗುತ್ತೆ ಅಂತ ಹೇಳಿದ್ದೆ ಆದರೆ ಆ ಹೊತ್ತಿಗಾಗಲೇ ನಾನು ತುಂಬಾ ದೂರ ಹೋಗಿಬಿಟ್ಟಿದ್ದೆ ಯಾಕೋ ಆಕೆಯನ್ನ ಬಿಟ್ಟು ಬಿಡಬೇಕು ಅಂತ ಅನ್ನಿಸಲೇ ಇಲ್ಲ ಸಾರಿ ಕಣೋ , ನನ್ನಿಂದ ತುಂಬಾ ಹಿಂಸೆಯಾಯಿತು ನಿನಗೆ ಪ್ರೀತಿಯ ಹೆಸರಲ್ಲಿ ಸ್ನೇಹಕೆ ಕೊಡಲಿಯೇಟು ಬಿದ್ದಿದೆ ಮದುರ ಸ್ನೇಹದಲ್ಲಿ ಮೌನ ತಬ್ಬಿದೆ ಪ್ರೀತಿಯಲ್ಲಿ ನಮ್ಮ ಸ್ನೇಹ ಕಳೆದಿದೆ ಕ್ಷಮಿಸಿಬಿಡಿ ಒಮ್ಮೆ ಕ್ಷಮಿಸಿಬಿಡಿ ಜ್ಯೋತಿ ಅಕ್ಕನಿಗೆ ಮಾತು ಕೊಟ್ಟು ತಪ್ಪಿ ಬಿಟ್ಟೆ , ಸತ್ಯವಾಗಿ ನಿಮಗಾರಿಗೂ ಹರ್ಟ್ ಮಾಡುವ ಉದ್ದೇಶ ಇರಲಿಲ್ಲ ಕೈಮುಗಿದು ಕೇಳುವೆ ಒಮ್ಮೆ ಕ್ಷಮಿಸಿ ಬಿಡಿ ನಿಮ್ಮೆದುರು ನಿಂತು ಕ್ಷಮೆ ಕೇಳುವ ಧೈರ್ಯ ನನ್ನಲ್ಲಿಲ್ಲ ಒಮ್ಮೆ ಕ್ಷಮಿಸಿ ಬಿಡಿ ಪ್ಲೀಸ್. ಇಂತಿ ಪಾಪಿ ವಿನು